ಈ ಸರಣಿಯಲ್ಲಿ ಇನ್ನೂ ಹಲವಾರು ವಿಷಯಗಳು ಬರೋದರಲ್ಲಿವೆ - ಅವುಗಳಲ್ಲಿ ಮುಖ್ಯವಾದವುಗಳು: Tell me about yourself, Resume, Cover letter, Thank you letter, Why should I hire you? How much money are you looking for? ಇತ್ಯಾದಿ...ಇವುಗಳಲ್ಲಿ ಒಂದೊಂದಾಗೇ ನೋಡಿಕೊಂಡು ಬರೋಣ.
೩) Tell me about yourself!
ನಿಮ್ಮ ಬಗ್ಗೇನೇ ಹೇಳಿಕೊಳ್ಳೋದಕ್ಕೆ ಸಂಕೋಚವೇಕೆ, ಅದಕ್ಕೂ ತಯಾರಿ ಅನ್ನೋದು ಬೇಕೆ ಎಂದರೆ ಹೌದು ಎನ್ನುತ್ತೇನೆ. ಸಂಕೋಚ ಎಲ್ಲರಿಗೂ ಇರಲಾರದು ಆದರೆ ಎಷ್ಟೋ ಬಾರಿ ಈ ಪ್ರಶ್ನೆಯ ಉತ್ತರವೇ ನಿಮ್ಮ ಸಂದರ್ಶನವನ್ನು make or break ಮಾಡಬಲ್ಲದು. ಆದ್ದರಿಂದ ನೀವು ಗಂಭೀರವಾಗಿ ಯಾವುದಾದರೂ ಸಂದರ್ಶನಕ್ಕೆ ತಯಾರಾಗುತ್ತಿದ್ದರೆ ಕೊನೇ ಪಕ್ಷ ಏನಿಲ್ಲವೆಂದರೂ ಈ ಪ್ರಶ್ನೆಯ ಉತ್ತರಕ್ಕಾದರೂ ತಯಾರಾಗಿ. ಎಷ್ಟೋ ಸಾರಿ icebreaker ಆಗಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೂ, ಈ ಪ್ರಶ್ನೆಯನ್ನು ಕೇಳಿದ ಸಂದರ್ಶಕ ಏನನ್ನು ನಿರೀಕ್ಷಿಸುತ್ತಾನೆ/ಳೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಎಲ್ಲವೂ ಸುಲಭವಾದೀತು.
ನಿಮ್ಮ ಸಂದರ್ಶನ ಒಂದೇ ಫೋನ್ ಮುಖಾಂತರ ನಡೆಯುತ್ತಿರಬಹುದು ಅಥವಾ ಮುಖಾಮುಖಿ ಇದ್ದಿರಬಹುದು, ಆದರೂ ಸಹ ನಾನು ನಡೆಸಿದ, ನಾನು ಸಂದರ್ಶಕನಾಗಿ ಹೋದ ಎಷ್ಟೋ ಸಂದರ್ಶನಗಳಲ್ಲಿ ಈ ಪ್ರಶ್ನೆಯನ್ನೆ ಮೊಟ್ಟಮೊದಲ ಪ್ರಶೆಯನ್ನಾಗಿ ಕೇಳಿದ್ದಿದೆ, ಹೀಗೆ ಇನ್ನು ಮುಂದೆ ಕೇಳುತ್ತಾರೆ ಎನ್ನುವ ನನ್ನ ನಂಬಿಕೆಯಿಂದಲೇ ನಾನು ಈ ಪ್ರಶ್ನೆಯ ಉತ್ತರ ಅತಿಮುಖ್ಯ ಎಂದು ಮೊದಲೇ ಹೇಳಿಬಿಡುತ್ತೇನೆ. ಜೊತೆಯಲ್ಲಿ ಈ ಪ್ರಶ್ನೆಗೆ ಉತ್ತರ ಸುಲಭವೆಂದು ನೀವೆಂದುಕೊಂಡಿರಬಹುದು, ಆದರೂ ಹೊಸ ಸ್ಥಳ, ಅಪರಿಚಿತರ ನಡುವೆ ನಿಮ್ಮ-ನಿಮ್ಮ ಪರಿಚಯವನ್ನು ಹೇಳಿಕೊಳ್ಳುವಲ್ಲಿ ತೊಂದರೆ ಏನಾದರೂ ಇದ್ದೀತೆಂದು ನಿಮಗನ್ನಿಸಿದರೆ ನೀವು ಈ ಪ್ರಶ್ನೆಯ ಉತ್ತರವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು. ಅಲ್ಲದೇ ಅವರು ಪ್ರಶ್ನೆ ಕೇಳಿದ ನಂತರ ಅದಕ್ಕೊಂದು ಉತ್ತರ ಸಿದ್ಧ ಪಡಿಸುವುದಕ್ಕಿಂತ ಮೊದಲೇ ಉತ್ತರವನ್ನು ಸಿದ್ಧಪಡಿಸಿಕೊಂಡು ಮನದಟ್ಟು ಮಾಡಿಕೊಂಡಿರುವುದು ಒಳ್ಳೆಯದು.
ನಿಮಗೆ Tell me about yourself... ಎಂದು ಪ್ರಶ್ನೆ ಕೇಳಿದವರ ಮನಸ್ಸಿನಲ್ಲಿ ಏನಿದ್ದಿರಬಹುದು! ಅವರು ನಿಜವಾಗಿಯೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ನಿಮ್ಮ ಮಾತುಕಥೆಗಳು (communication skills) ಹೇಗಿವೆ ಎಂದು ಕಂಡುಕೊಳ್ಳುತ್ತಿದ್ದಾರೋ ಅಥವಾ ಈ ಎರಡೂ ಇದ್ದಿರಬಹುದು, ಮತ್ತೇನೋ ಇದ್ದಿರಬಹುದು. ಆದರೂ ಎಲ್ಲರಿಗೂ ಅನ್ವಯವಾಗುವಂತಹ ಒಂದು standard ಉತ್ತರವನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.
ಈ ಪ್ರಶ್ನೆಗೆ ಉತ್ತರವಾಗಿ, ಈ ಪ್ರಶ್ನೆಗಳನ್ನು ಕೇಳಿದವರಿಗೆ ನಿಮ್ಮ ಹೆಸರು ಈಗಾಗಲೇ ಗೊತ್ತಿದ್ದರೆ ಮತ್ತೆ ಅದನ್ನೇ ಹೇಳಬೇಡಿ ಇಲ್ಲವಾದರೆ, ಸೂಚ್ಯವಾಗಿ ಹೇಳಿ. (What is your name? ಎಂದು ಯಾರಾದರೂ ಕೇಳಿದಾಗ ಕೆ.ಜಿ. ಮಕ್ಕಳು ಹೇಳಿದಂತೆ My name is...ಎಂದು ಉಲಿಯಬೇಡಿ, ಅದರ ಬದಲಿಗೆ ಗಂಭೀರವಾಗಿ I am XYZ ಎಂದು ಮಾತ್ರ ಹೇಳಿ! ಕನ್ನಡದಲ್ಲಿ ಯಾರಾದರೂ ನಿಮ್ಮ ಹೆಸರೇನು ಎಂದರೆ ನೀವು ಅದಕ್ಕುತ್ತರವಾಗಿ 'ನನ್ನ ಹೆಸರು ...' ಎಂದೇನೂ ಹೇಳುವುದಿಲ್ಲ ತಾನೆ?!)
Tell me about yourself ನಲ್ಲಿ ಮುಖ್ಯವಾಗಿ ಹೇಳಬೇಕಾದವುಗಳು:
ನಿಮ್ಮ Profession, ಅಥವಾ level (ಉದಾಹರಣೆಗೆ - I am senior software engineer, I am manager of ...systems)
a) Expertise - ನಿಮ್ಮ functions / capabalities
b) Strengths include... - unique professional qualities
c) Worked with/for ... - type of organizations / industries /groups (depends on the scope of the interview)
ಇವುಗಳ ಸಹಾಯದಲ್ಲಿ ನೀವು ಏನನ್ನು ಮಾಡಿದ್ದೀರಿ ಎಂಬುದನ್ನು ಹೇಳಿ. ಅಕಸ್ಮಾತ್ ನಿಮಗೇನಾದರೂ ಇದು ಹೊಸ ಕೆಲಸವಾದರೆ, (ಅನುಭವ ಇದ್ದೂ ಬೇರೆ ಇಂಡಸ್ಟ್ರಿಗೆ ಹೋದರೆ) ಏನೇನು ಮಾಡಬಲ್ಲಿರಿ ಎಂಬುದನ್ನು ಹೇಳಬಹುದು.
ಈ ಹಿನ್ನೆಲೆಯಲ್ಲಿ Tell me about yourself ಗೆ ಉತ್ತರವಾಗಿ: I am so and so...(ಹೆಸರು ಆಪ್ಷನಲ್ ಅಥವಾ ಅಗತ್ಯಕ್ಕೆ ತಕ್ಕಂತೆ), for the last X years I am working as a ((your designation)) in ((company/group name))(if it is a same company interview in a different group, then mention group name).
Then include your expertiese - what you have done -
ಉದಾಹರಣೆಗೆ:
Designe(d) databases, systems
Resolve(d) system issues
Enhance(d) performance of the systems
Manage(d) a team of N number of individuals
Oversea/saw a part of the project in XYZ appplication ಇತ್ಯಾದಿ...
ನಂತರ ನಿಮ್ಮ Unique functions/capabilities ಹೇಳಿ - ಇದನ್ನು ಹೇಳುವಾಗ ನೀವು ಅರ್ಜಿ ಗುಜರಾಯಿಸಿದ ಕೆಲಸವನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಹೇಳಿ.
ನಂತರ ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ, ಎಂಬುದನ್ನು ಸ್ಯೂಚ್ಯವಾಗಿ ಹೇಳಿ.
ಈ ಪ್ರಶ್ನೆಗೆ ಉತ್ತರ ಸುಮಾರು ೨-೩ ನಿಮಿಷ ಹಿಡಿಯಬಹುದು, ಸಮಯವನ್ನು ನೀವೇ ಅಂದಾಜು ಮಾಡಬೇಕು, ನಿಮ್ಮ ಹಾಗೂ ಸಂದರ್ಶನ ನಡೆಸುವವರ ಅನುಕೂಲಕ್ಕೆ ತಕ್ಕಂತೆ. ಈ ಪ್ರಶ್ನೆಗೆ ಉತ್ತರವನ್ನು ಹೇಳುವಾಗ ನೀವು ನಿಮ್ಮ confidence level ನ ಉತ್ತುಂಗ ಸ್ಥಿತಿಯಲ್ಲಿರಬೇಕು. ಈ ಪ್ರಶ್ನೆಗೆ ಪೂರ್ವ ನಿರ್ಧಾರಿತ, ಅಥವಾ ಈಗಾಗಲೇ ಸಿದ್ಧಪಡಿಸಿದ ಉತ್ತರವನ್ನು ಶಾಲೆಯ ಮಕ್ಕಳು ಒಪ್ಪಿಸಿದ ಹಾಗೆ ಕೇಳುವವರ ಕಣ್ಣಿನಲ್ಲಿ ಕಣ್ಣನ್ನು ಇಟ್ಟು, ನೇರವಾಗಿ ಕುಳಿತು ಆದಷ್ಟು ಆತ್ಮವಿಶ್ವಾಸ, ಒಂದು ಕಿರುನಗೆಯನ್ನು ವ್ಯಕ್ತಪಡಿಸಿ ಹೇಳುವುದು.
ದಯವಿಟ್ಟು ಜೋಲುಮೋರೆಯನ್ನು ಮಾತ್ರ ಹಾಕಿಕೊಳ್ಳಬೇಡಿ :-)
೪) ನಿಮ್ಮ ರೆಸ್ಯೂಮೆ (ಅಥವಾ ನಿಮ್ಮ ಜಾತಕ, ಅಥವಾ ಹಣೆಬರಹ)
ನನ್ನ ಅನುಭವದಲ್ಲಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ಸಂದರ್ಶನ ಮಾಡಿದ್ದೇನೆ ಹಾಗೂ ಬೇಕಾದಷ್ಟು ಸಂದರ್ಶನವನ್ನು ನಾನೇ ಅಭ್ಯರ್ಥಿಯಾಗಿ ಅಟೆಂಡ್ ಮಾಡಿದ್ದೇನೆ. ನೀವು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಸರಿಯಾಗಿ ಸಿದ್ಧಪಡಿಸಿರದ ರೆಸ್ಯೂಮೆಯೂ ಒಂದು. ರೆಸ್ಯೂಮೆ ಅನ್ನೋದು ಅನ್ಯದೇಶೀಯ ಪದ, ಅದರ ಬದಲಿಗೆ bio-data, CV, candidate profile ಇತ್ಯಾದಿಗಳೂ ಬಳಕೆಯಲ್ಲಿವೆ. ಏನೇ ಇರಲಿ, ನೀವು ಎಷ್ಟೇ ದೊಡ್ಡ ಆಪೀಸರರಾಗಿರಲಿ, ಇನ್ನೂ ಈಗಷ್ಟೇ ಕಾಲೇಜು ಬಿಟ್ಟು ಹೊರಗಿನ ಬದುಕನ್ನು ನೋಡುತ್ತಿರಲಿ, ನಿಮ್ಮ ರೆಸ್ಯೂಮೆ ಎರಡು ಪುಟಗಳಿಗಿಂತ ಹೆಚ್ಚಿರುವುದು ಬೇಡ.
ನಾನು ಹಲವಾರು ರೆಸ್ಯೂಮೆಗಳಲ್ಲಿ ನೋಡಿದಂತೆ ಅದರಲ್ಲಿ ನಿಮ್ಮ ಪಾಸ್‌ಪೋರ್ಟ್ ನಂಬರಾಗಲೀ, ಜನ್ಮ ದಿನಾಂಕವನ್ನಾಗಲೀ ನಮೂದಿಸುವುದು ಬೇಡ. ಸಂದರ್ಶನ ನಡೆದು ನೀವು ಹೊರದೇಶಕ್ಕೆ ಹೋಗಲು ಇನ್ನೂ ಬೇಕಾದಷ್ಟು ಸಮಯವಿರೋದರಿಂದ ವೀಸಾಬರುವವರೆಗೆ ಪಾಸ್‌ಪೋರ್ಟ್ ವಿವರವನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಿ! ನೀವು ನಿಮ್ಮ ರೆಸ್ಯೂಮೆಯಲ್ಲಿ ತೋರಿಸಬೇಕಾದುದು ಮುಖ್ಯವಾಗಿ:
* ನಿಮ್ಮ ಹೆಸರು,
* ಪೂರ್ಣ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸಗಳ ಸಹಿತ
(ನಿಮ್ಮ ಬಳಿ ಇರುವ ಹತ್ತು ಫೋನ್ ನಂಬರುಗಳು, ಇಪ್ಪತ್ತೈದು ಇ-ಮೇಲ್ ವಿಳಾಸಗಳ ಬದಲಿಗೆ ರಿಲೈಯಬಲ್ ಆಗಿರೋ ಒಂದೇ ಒಂದು ಸಾಕು)
* ಇದಾದ ಮೇಲೆ ಒಂದು ನೀವು ಯಾರು ಎಂಬುದಕ್ಕೆ ಒಂದು Summary ಯನ್ನು ಕೊಡಿ
(ಉದಾಹರಣೆಗೆ: I have X years of experience in <ನಿಮ್ಮ specialty>. I am so and so (ನಿಮ್ಮ current job profile). I have excellent interpersonal, organizational and follow-through skills.
(ಎಕ್ಸಲೆಂಟ್ ಎಂದು ತೋರಿಸಿದ್ದರಿಂದ ನಿಮ್ಮ ಸ್ಕಿಲ್ಸ್ ಎಕ್ಸಲೆಂಟ್ ಆಗಿ ಇರಲೇಬೇಕೇ ಎನ್ನುವುದು million dollar ಪ್ರಶ್ನೆ - excellent in comparision to what?)
* ನಿಮ್ಮ ಸ್ಕಿಲ್ಸ್‌ಗಳನ್ನು ಸಮರೈಸ್ ಮಾಡಿ - ಉದಾಹರಣೆಗೆ: hardware/software, speciality (internal medicine, dermatology), engineering... ನಿಮ್ಮ ಇಂಡಸ್ಟ್ರಿಗೆ ಅನ್ವಯವಾಗುವಂತಿರಲಿ.
* ನಿಮ್ಮ ವಿದ್ಯಾಭ್ಯಾಸವನ್ನು ಸೂಚ್ಯವಾಗಿ ತಿಳಿಸಿ: ಡಿಗ್ರಿ, specialization, University, Year
(ನಿಮ್ಮ ಕ್ಲಾಸಿನಲ್ಲಿ ಎಷ್ಟು ಜನರಿದ್ದರು, ನಿಮ್ಮ ಸ್ನೇಹಿತರ ವಿವರವೆಲ್ಲ ಇಲ್ಲಿ ಬೇಡ)
* ನಿಮ್ಮ ಬಳಿ ಯಾವುದಾದರೂ ಸ್ಪೆಷಲೈಸ್ಡ್ ಸರ್ಟಿಫಿಕೇಷನ್ ಗಳಿದ್ದರೆ ಇಲ್ಲಿ ತಿಳಿಸಿ - Cisco, PMP, Java, ಇತ್ಯಾದಿ
* ಅನುಭವ (Experience - starting with most current job)
ಕಂಪನಿ ಹೆಸರು, ನಿಮ್ಮ ಹುದ್ದೆ, MM/YY - MM/YY ಫಾರ್ಮ್ಯಾಟ್
ಅದರ ಕೆಳಗೆ ನಿಮ್ಮ ರೋಲ್ ಅನ್ನು ವಿವರಿಸಿ - ಪ್ರಾಜೆಕ್ಟ್/ಕೆಲಸ/ಕಂಪನಿಯ ಬಗ್ಗೆ ಕಡಿಮೆ ತಿಳಿಸಿ, ನೀವು ಏನು ಮಾಡುತ್ತಿದ್ದೀರಿ/ಮಾಡಿದ್ದಿರಿ ಎಂದು ತಿಳಿಸುವುದು ಒಳ್ಳೆಯದು.
ಇದೇ ರೀತಿ ಉಳಿದೆಲ್ಲ ಪ್ರಾಜೆಕ್ಟ್/ಕಂಪನಿಗಳ ಬಗ್ಗೆಯೂ ತಿಳಿಸಿ, ಪ್ರಾಜೆಕ್ಟ್/ಕಂಪನಿ ಹಳೆಯದಾದಷ್ಟೂ ವಿವರ ಕಡಿಮೆ ಇರಲಿ. ನೀವು ಐದು ಅಥವಾ ಹತ್ತು ವರ್ಷದ ಹಿಂದೆ ಮಾಡಿದ ಕೆಲಸ ಬಗ್ಗೆ ಈ ಎಂಪ್ಲಾಯರ್ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟಿರಲಿ.
ನಿಮ್ಮ ಪ್ರಾಜೆಕ್ಟ್‌ನಲ್ಲಿರುವ ಮಾಡ್ಯೂಲ್‌ಗಳನ್ನು ವಿವರಿಸಿ ಎಲ್ಲರ ತಲೆ ತಿನ್ನುವ ಪ್ರಯತ್ನ ಮಾಡದೇ, ಸಿಗುವ ಸಮಯ ಹಾಗೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
- ನಿಮ್ಮ ಬಳಿ ಇರುವ ರೆಸ್ಯೂಮೆಯನ್ನು ನೀವು ಅರ್ಜಿ ಹಾಕುವ ಪ್ರತಿಯೊಂದು ಕೆಲಸಕ್ಕೂ ಅನ್ವಯವಾಗುವಂತೆ ಬದಲಾಯಿಸಿ, ಹಾಗೂ ಹಾಗೆ ಬದಲಾಯಿಸಿದ ಪ್ರತಿಯೊಂದನ್ನು ಆ ಕೆಲಸದ ವಿವರಗಳನ್ನೊಳಗೊಂಡ ಪುಟದ ಜೊತೆಯಲ್ಲಿ ಇಟ್ಟುಕೊಳ್ಳಿ. ನೀವು ಹಲವಾರು ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದರೆ, ರಿಕ್ರ್ಯೂಟರ್ ಅಥವಾ ಕಂಪನಿಯವರು ಕರೆದಾಗ ನೀವು ಯಾವ ರೆಸ್ಯೂಮೆಯನ್ನು ಅವರಿಗೆ ಕಳಿಸಿದ್ದೀರೆಂದು ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ?
- ಪ್ರತಿ ರೆಸ್ಯೂಮೆ ೯ ಸೆಕೆಂಡ್ ಪರೀಕ್ಷೆಗೆ ಒಳಪಡುತ್ತದೆಯಂತೆ (9 second test), ಅಂದರೆ ನೋಡೋರೇನಿದ್ದರೂ ಕೆಲವೇ ಕ್ಷಣಗಳಲ್ಲಿ ಅದನ್ನು ಗಮನಿಸೋದರಿಂದ ಯಾವಾಗಲೂ ಚಿಕ್ಕ ಹಾಗೂ ಚೊಕ್ಕ ರೆಸ್ಯೂಮೆ ಒಳ್ಳೆಯದು.
- ನೀವು ಕೆಲಸಕ್ಕೆ ಅರ್ಜಿ ಹಾಕುವ ದೇಶ/ಭಾಷೆ/ಪರಿಸರವನ್ನು ಗಮನದಲ್ಲಿಟ್ಟುಕೊಂಡಿರಿ - ಭಾರತದಲ್ಲಿ 'ಒಳ್ಳೆಯ' ರೆಸ್ಯೂಮೆ ಅನ್ನಿಸಿಕೊಂಡಿದ್ದು, ಜಪಾನ್, ಅಥವಾ ಅಮೇರಿಕದಲ್ಲೂ ಒಳ್ಳೆಯ ರೆಸ್ಯೂಮೆ ಆಗಬೇಕೆಂದೇನೂ ಇಲ್ಲ, ಉತ್ತರದವರಿಗೆ ಇಷ್ಟವಾದದ್ದು ದಕ್ಷಿಣದವರಿಗೂ, ಪೂರ್ವದ್ದು ಪಶ್ಚಿಮದವರಿಗೂ ಅನ್ವಯವಾಗಬೇಕೆಂದೇನೂ ಇಲ್ಲ.
ನಿಮ್ಮ ರೆಸ್ಯೂಮೆಯಲ್ಲಿ ಬಹಳ ಸರಳವಾದ ಫಾಂಟ್ ಹಾಗೂ ವಿನ್ಯಾಸವನ್ನು ಬಳಸಿರಿ - Arial ಅಥವಾ Times New Roman ಫಾಂಟ್ ಬಳಸಿ, ಹನ್ನೆರಡು ಸೈಜ್ ಇದ್ದರೆ ಒಳ್ಳೆಯದು, ಮಾರ್ಜಿನ್ ಬಹಳಷ್ಟು ಬಿಡಿ, Underline, Italicize ಬೇಡ (ಸ್ಕ್ಯಾನ್ ಮಾಡಿದರೆ ಅನುಕೂಲವಾಗಲಿ ಎಂದು), ಕಪ್ಪು ಅಲ್ಲದೇ ಬೇರೆ ಬಣ್ಣವನ್ನು ಬಳಸಲೇ ಬೇಡಿ.
***
ಹೀಗೆ ನಿಮ್ಮ ರೆಸ್ಯೂಮೆ ನಿಮ್ಮ ಮಾರ್ಕೆಟಿಂಗ್ ಟೂಲ್ ಆಗಿ ನಿಮ್ಮನ್ನು ಹೊರಗಡೆ 'ಸೇಲ್' ಮಾಡುವಲ್ಲಿ ಸಹಾಯಕವಾಗುವುದರಿಂದ ಅದು ಚೆನ್ನಾಗಿರುವಂತೆ ಅಲ್ಲದೇ ನೀವು ಬೆಳೆದ ಹಾಗೆ ಬೆಳೆದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.
***
ಮುಂದಿನ ಶನಿವಾರ:
4) Cover letter
5) Thank you letter