Monday, March 10, 2025

US ನಲ್ಲಿ MS ಮಾಡಿದ್ರೆ ಹೇಗೆ?

ನನಗೆ ಆಗಿದ್ದಾಗ್ಗೆ ಕಾಲ್‌ಗಳು, ಇ-ಮೇಲ್‌ಗಳು ಬರ್ತಾನೇ ಇರುತ್ವೆ. ನಾನು MS ಮುಗಿಸಿದೀನಿ, ಅಥವಾ ಮುಗಿಸ್ತಾ ಇದ್ದೀನಿ, ನನಗೊಂದು ಕೆಲ್ಸಾ ಬೇಕು ಅಂತ. ಇವರಲ್ಲಿ ಮುಕ್ಕಾಲು ಪಾಲು ಜನ ಕಂಪ್ಯೂಟರ್ ಸೈನ್ಸ್ ಪದವೀಧರರು.

ಹೆಚ್ಚಿನವರು OPT (Optional Practical Training) period ನಲ್ಲಿ ಇರ್ತಾರೆ. ಇನ್ನು ಕೆಲವರು, MS ಮುಗಿಸೋದಕ್ಕಿಂತಲೂ ಮೊದಲೇ ಕೆಲ್ಸ ಹುಡುಕೋಕೆ ಶುರು ಮಾಡ್ತಾರೆ.

ನೀವಿನ್ನು ಈಗಷ್ಟೇ ಇಂಡಿಯಾದಲ್ಲಿ ಕಂಪ್ಯೂಟರ್ ಸೈನ್ಸ್ ಗ್ರಾಜುಯೇಟ್ ಆಗಿ ಕಾಲೇಜಿನಿಂದ ಹೊರಗಡೆ ಬಂದು ಕೆಲ್ಸ ಹುಡುಕುತ್ತಿರೋರ್ ಆದ್ರೆ, ಅಥವಾ ಈಗಾಗ್ಲೇ ಕೆಲ್ಸಕ್ಕೆ ಸೇರಿಕೊಂಡು ಒಂದೆರಡು ವರ್ಷ ಅನುಭವ ಹೊಂದಿದವರಾದ್ರೆ,

ನಿಮಗೆ ನಾನು ಮೊದಲು ಕೇಳೋ ಪ್ರಶ್ನೆ - ಅಮೇರಿಕಕ್ಕೆ ಏಕೆ ಬರ್ತಾ ಇದ್ದೀರ? ಅಂತ.

No, seriously, why do you want to come to the US? What will higher education entail? What are your ultimate goals/objectives? And what price are you willing to pay?

ನಮ್ ಕಡೆ ಒಂದು ಮಾತಿದೆ: ಇಲ್ಲಿ ಸಲ್ಲದವರು ಎಲ್ಲಿಯೂ ಸಲ್ಲರೂ ಅಂತ.

ಯಾಕೆ ಈ ಮಾತು ಹೇಳ್ತೀನಿ ಅಂದ್ರೆ, MS ಮಾಡುವುದರ ಮೂಲಕ, ಈಗ ನೀವಿರೋ situation ನಿಂದ ಮುಕ್ತಿ ಪಡೀಬೇಕು ಅನ್ನೋ ಯೋಚನೆ ನಿಮಗಿದ್ರೆ, ಅದನ್ನ ಮತ್ತೆ ಮತ್ತೆ ಯೋಚಿಸಿಕೊಳ್ಳೀ ಅಂತ.

ಈಗ ತಾನೆ ಕಾಲೇಜು ಮುಗಿಸಿ ಹೊರಗಡೆ ಬಂದಾಗ ನಿಮ್ಮ ಟಿಕೇಟಿಗೆ 6 ರಿಂದ 9 ತಿಂಗಳ ಬೆಲೆ, ಅಲ್ಲಿಯವರೆಗೆ ನೀವು fresh graduate ಆಗಿರ್ತೀರ. Campus interview ನಲ್ಲಿ ಸೆಲೆಕ್ಟ್ ಆಗ್ಲಿಲ್ಲ ಅಂದ್ರೆ, ಅಥವಾ 6 ತಿಂಗಳಲ್ಲಿ ಒಂದು ಸೂಕ್ತವಾದ ಕೆಲ್ಸ ಸಿಗ್ಲಿಲ್ಲ ಅಂದ ತಕ್ಷಣ ಒಂಥರಾ desperation, frustruation ಇವೆಲ್ಲ ಹುಟ್ಟೋಕೆ ಶುರುವಾಗ್ತವೆ. ನಿಮ್ಮ ನಿಮ್ಮ ಫ಼ೈನಾನ್ಸಿಯಲ್ ಸಿಚುವೇಶನ್ ಆದರಿಸಿ, ಮತ್ತು ಫ಼್ಯಾಮಿಲಿ ಸಪೋರ್ಟ್ ಮೂಲಕ ಎಷ್ಟು ಸಾಧ್ಯವೋ ಅಷ್ಟು ಸಹಾಯವಾಗುತ್ತೆ, ಒಮ್ಮೊಮ್ಮೆ ಅದೂ ಕೂಡ ಒಂದು ಹೊರೆ ಅನ್ಸುತ್ತೆ.

’ಒಂದು ವೇಳೆ ನನಗೆ ಕೆಲ್ಸ ಸಿಗದೇ ಇದ್ರೆ ಏನು ಮಾಡೋದು?’ ಅನ್ನೋ ಯೋಚನೆ ಬಾರದೇ ಇರೋರು ಬಹಳ ಕಡಿಮೆ.

ಇಂಥಾ ಸಮಯದಲ್ಲಿ ಎದೆಗುಂದದೆ, ನೀವು ಆಯ್ದುಕೊಂಡಿರೋ ವಿಷಯಗಳಲ್ಲಿ "ಈಸಬೇಕು, ಇದ್ದು ಜೈಸಬೇಕು". ಅದರ ಬದಲಿಗ ಅಮೇರಿಕನ್ ಯೂನಿವರ್ಸಿಟಿಯಲ್ಲಿ ನಾನು master degree ಮಾಡ್ತೇನೆ ಅಂದ ತಕ್ಷಣ ನಿಮ್ಮ ಮೂಲಭೂತ ಸಮಸ್ಯೆಗೆ ಉತ್ತರ ಸಿಕ್ಕಂತಾಗಲ್ಲ, ಹಾಗೇ ಅದು solve ಆಗಲ್ಲ.

ಅಥವಾ ನೀವು ಈಗಾಗ್ಲೇ ಯಾವುದೋ ಒಂದು multi-national ಕಂಪನಿಯಲ್ಲಿ ಕೆಲ್ಸ ಮಾಡ್ತಾ ಇದ್ದು, ಆ rut ನಿಂದ ಹೊರಗಡೆ ಬರಬೇಕು ಅನ್ನೋದಾದ್ರೆ, ಇಲ್ಲಿ ಬಂದು MS ಮಾಡೋದು ನಿಮಗೆ ಒಂಥರಾ escape ಥರ ಕಾಣಿಸ್ಬಹುದು. ನಿಮಗೂ, ಫ಼್ರೆಶ್ ಗ್ರಾಜುಯೇಟ್ಸ್‌ಗೂ ಒಂದೇ ಒಂದು ವ್ಯತ್ಯಾಸ ಏನು ಅಂದ್ರೆ, ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಕೂಡಿರುತ್ತೆ ಜೊತೆಗೆ ನಿಮಗೆ ಕೆಲಸ ಮಾಡಿದ ನಿಜವಾದ ಅನುಭವ ಇರುತ್ತೆ.

***

ನೀವು ಮೇಲಿನ ಎರಡರಲ್ಲಿ ಯಾವುದೇ ಕೆಟಗರಿಯಲ್ಲಿದ್ದರೂ ಒಂದು ನಿಮಿಷ ಯೋಚಿಸಿ: ಅಮೇರಿಕದಲ್ಲಿ MS ಮಾಡಿದರೆ ಅದರಿಂದ ಅನುಕೂಲ ಏನು? ಯಾವ ಫ಼ೀಲ್ಡ್‌ನಲ್ಲಿ ಮಾಡಬೇಕು? ಯಾವ ಯೂನಿವರ್ಸಿಟಿಯಲ್ಲಿ ಮಾಡಿದರೆ ಒಳ್ಳೇದು. ಮುಖ್ಯವಾಗಿ ಯಾವುದಕ್ಕೆ ಎಷ್ಟು ದುಡ್ಡು ಖರ್ಚಾಗುತ್ತದೆ, ಅಂತ.

ನಿಮ್ಮ MS ಮಾಡುವ ಪ್ಲಾನು - ಅದೇ ಫ಼ೈನಲ್ ಪ್ಲಾನ್ ಅಲ್ಲ - ಆದ್ದರಿಂದ MS ಮಾಡಿದ ಮೇಲೆ ಮುಂದೇನು ಅಂತ ಮೊದಲೇ ಯೋಚನೆ ಮಾಡುವುದು ಒಳ್ಳೇದು. (ಎಕ್ಸಿಟ್ ಸ್ಟ್ರಾಟೆಜಿ).

ಜೊತೆಗೆ, ಎಲ್ಲರಿಗೂ computer science gradution ಅಂದ್ರೆ coding ಮಾಡ್ಬೇಕು ಅಂತ ಏನೂ ಇಲ್ಲ; we have so many sub fields to chose from - Data Science, Security, Project Management, Pure development, ಇತ್ಯಾದಿ.

If you choose a development area, you must specialize in something - either a front-end or back-end framework. The most likely ones are Angular or React based ecosystems. More importantly, you should clearly explain Object-Oriented principles as if you are answering a question - Tell me about yourself.

I have seen so many Bachelor's in Computer Science and Master's in Computer Science graduates, who can't write a few lines of Java or Python code to solve an issue or a simple string manipulation.

I don't want you to be one of them.

More over, when you say something that "I know..." you better know it... In computer science, it is fundamental that you master an OS (preferably Linux), one language (Java or Python), and one DB like MySQL or any RDBMS. That's the absolute minimum.

This is where a lot of practice is needed, indeed - I think I will cover more on this further in the "interview" related episodes.

***

Back to this topic: MS ಮಾಡೋದರ ಬಗ್ಗೆ, ಇನ್ನೊಂದು ಮುಖ್ಯವಾದ ರಿಸರ್ಚ್ ನೀವು ಕುದ್ದಾಗಿ ಮಾಡಲೇ ಬೇಕು - which is around the market condition.

Don't do an MS as a means to escape from a market downturn... 

(The average market recession for IT companies can be understood through historical data: since 2000, the S&P 500 has taken an average of 647 trading days to recover after a recession, while the NASDAQ takes about 330 days on average.)

ನೀವು MS ಆಗಿ ಹೊರಗಡೆ ಬರೋ ಹೊತ್ತಿಗೆ ಮಾರ್ಕೆಟ್ ಹೇಗಿರುತ್ತೆ ಅನ್ನೋದರ ಮೇಲೆ ನಿಮ್ಮ ಜಾಬ್ ಸಿಗೋದು ನಿರ್ಧಾರವಾಗುತ್ತೆ. ಹಾಗೆ there are so many Macro economics elements that could play a siginificant role, which is beyond your control -- let's worry about what is in your control now.

***

ಇಂಡಿಯಾದಲ್ಲಿ ಕೆಲ್ಸಕ್ಕೇನೂ ಇತ್ತೀಚೆಗೆ ಕೊರತೆ ಇಲ್ಲ. ನಿಮಗಿರೋ ಈಗಿನ ಡಿಗ್ರಿಗೆ ಮತ್ತೊಂದು ಡಿಗ್ರಿ ಸೇರ್ಸೋ ಬದಲು, ನಿಮ್ಮ ಬದುಕನ್ನೇ ಬದಲಾಯಿಸೋ MBA ಅನ್ನು ಒಂದು ಪ್ರಿಸ್ಟೀಜಿಯಸ್ university ಇಂದ ಮಾಡಿದ್ರೆ ಹೇಗಿರುತ್ತೆ? ಅಂತ ಯೋಚನೆ ಮಾಡಿ.

ಇಷ್ಟು ದಿನ ಹೇಗೋ ನಡೀತು. ಇನ್ನು ಮುಂದಿನ ಬದುಕನ್ನಾದರೂ ನಿಮಗೆ ಹೇಗೆ ಬೇಕೋ ಹಾಗೆ, ನಿಮಗಿಷ್ಟವಾಗಿರೋ ಸಬ್ಜೆಕ್ಟ್/ಸ್ಪೆಷಲೈಜ಼ೇಶನ್ ನಲ್ಲಿ ರೂಪಿಸಿಕೊಳ್ಳುವ ಕಾಲ ಇದಲ್ಲವೇ?

ಹಣ ಮಾಡಬೇಕು ಅನ್ನೋದಕ್ಕೆ ಹಲವಾರು ದಾರಿ. ಆದ್ರೆ ಅಮೇರಿಕದಲ್ಲಿ ಹಣದ ಜೊತೆಗೆ ಬೆಳೆಯೋದಕ್ಕೆ ಅವಕಾಶಗಳೂ ಹಲವಾರು, ಅವುಗಳ ಸಂಪೂರ್ಣ ಉಪಯೋಗ ಪಡುಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?

ಮುಂದಿನ ಎಪಿಸೋಡ್‍ಗಳಲ್ಲಿ, ಅಮೇರಿಕದ student life ಹೇಗಿರುತ್ತೆ ಅಂತ ವಿವರಿಸ್ತೀನಿ... 

Hope this is helpful.

Labels: , ,

0 Comments:

Post a Comment

<< Home