ರಿಕ್ರ್ಯೂಟರ್‌ಗಳಿಗೆ ಸುಳ್ಳನ್ನು ಹೇಳಬೇಕೆ?
ಈ ಪ್ರಶ್ನೆಗೆ ನನಗೆ ನಿಜವಾಗಿಯೂ ಉತ್ತರ ಗೊತ್ತಿಲ್ಲ, ಹಾಗೂ ನಾನು ಸುಳ್ಳನ್ನು ಹೇಳಿ ಎಂದು ನಿಮ್ಮನ್ನು ಪುಸಲಾಯಿಸುತ್ತಿಲ್ಲ ಹಾಗೂ ಪ್ರಚೋದಿಸುತ್ತಿಲ್ಲ!
ಆದರೆ, ಕೆಲವು ನಿಜ ಜೀವನದ ಅನುಭವಗಳನ್ನು ಗಣನೆಗೆ ತೆಗೆದುಕೊಂಡ ಮೇಲೆ ಬೇಕಾದಷ್ಟು ಜನ ಸುಳ್ಳನ್ನು ಹೇಳಿ ಸಾಧಿಸಿಕೊಂಡಿದ್ದನ್ನು ನೋಡಿ ಈ ಲೇಖನವನ್ನು ಬರೆಯಬೇಕಾಯಿತು. ನೀವು ನಿಮ್ಮ ರೆಸ್ಯೂಮೆ ಮೇಲೆ ಸುಳ್ಳನ್ನು ಹೇಳದಿದ್ದರೂ ನಿಮ್ಮ ಎಂಪ್ಲಾಯರ್ ಸುಳ್ಳನ್ನು ಹೇಳಿರಬಹುದು. ಈ ಕೆಳಗಿನ ನಿದರ್ಶನವನ್ನು ನೋಡಿ:
ನಾವು ೧೯೯೫ - ೯೬ ರ ಸಮಯದಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಗಳು ಅಗ್ರೆಸ್ಸಿವ್ ಆಗಿ ಅಲ್ಲಿಂದ ಇಲ್ಲಿಗೆ (ಅಮೇರಿಕಕ್ಕೆ) ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಳಿಸಿ 'ಬಾಡಿಶಾಪ್ಪಿಂಗ್' ಮಾಡಿ ಅದರಲ್ಲಿ ಮಿಲಿಯನ್ ಗಟ್ಟಲೆ ಕಾಸು ಮಾಡಿಕೊಳ್ಳುತ್ತಿದ್ದವು. ಆಗ ಅಲ್ಲಿ ನಮಗೆ ಕೆಲಸ ಮಾಡಲು ಇದ್ದ ಪ್ರಾಜೆಕ್ಟ್‌ಗಳು ಕೆಲವೊಂದು ನಿಜವಾಗಿಯೂ ಆಫ್ ಶೋರ್ ಸಂಬಂಧೀ ಕೆಲಸಗಳಾದರೆ ಇನ್ನುಳಿದವು ಅಲ್ಲೇ ಲೋಕಲ್ ಆಗಿ ಸೃಷ್ಟಿಸಿದ ಮಾಡ್ಯೂಲ್‌ಗಳು, ಅವುಗಳಿಗೆ ಲೋಕಲ್/ಫಾರಿನ್ ಕ್ಲೈಂಟುಗಳನ್ನು ಗಮನದಲ್ಲಿಟ್ಟುಕೊಂಡು ವಿಸ್ತೃತ ರೂಪವನ್ನು ಕೊಡಲಾಗುತ್ತಿತ್ತು. ನಾವು ಆಗಷ್ಟೇ ಗ್ರ್ಯಾಜುಯೇಷನ್ ಮುಗಿಸಿ ಬಂದಿದ್ದೆವು, ನಮಗೆ ಕಂಪ್ಯೂಟರ್ ಸಿಷ್ಟಂನಲ್ಲಿ ತರಬೇತಿ ಇತ್ತು, ಆದರೆ ಯಾವುದೇ "ನಿಜ"ವಾದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿ ಅನುಭವವಿರಲಿಲ್ಲ.
ನಮ್ಮ ಮೂಲ ರೆಸ್ಯೂಮೆಯನ್ನು ಎಷ್ಟರ ಮಟ್ಟಿಗೆ ತಿರುಚಲಾಗುತ್ತಿತ್ತೆಂದರೆ ನಮ್ಮನ್ನು ಅಮೇರಿಕದ ಕ್ಲೈಂಟುಗಳಿಗೆ ಬಹಳ ಉನ್ನತವಾದ ತರಬೇತಿ ಹಾಗು ಅನುಭವ ಉಳ್ಳವರು ಎಂಬ ಹೆಸರಿನಲ್ಲಿ ಮಾರ್ಕೆಟ್ ಮಾಡಲಾಗುತ್ತಿತ್ತು, ಅದಕ್ಕೆ ನಮ್ಮನ್ನು ತಕ್ಕ ಮಟ್ಟಿಗೆ 'ಸೀನಿಯರ್ ಕನ್ಸಲ್‌ಟೆಂಟ್' ಅಥವಾ 'ಸೀನಿಯರ್ ಅನಲಿಷ್ಟ್' ಗಳಾಗಿ ಬಿಂಬಿಸುತ್ತಿದ್ದರು. ನಾವು ಇಲ್ಲಿಗೆ ಬಂದ ಮೊದಮೊದಲು ಬಹಳು ಚಾಲೆಂಜ್‌ಗಳನ್ನು ಎದುರಿಸಬೇಕಾಗಿ ಬಂದಿತ್ತು. ಪರಿಸ್ಥಿತಿಗೆ ತಕ್ಕಂತೆ ಕಷ್ಟಪಟ್ಟು ಮುಂದೆ ಬಂದವರು ಬಂದೆವು, ಇನ್ನುಳಿದವರೆಲ್ಲ ಅಲ್ಲಲ್ಲೇ ಬಿದ್ದು ಹೋದರು, ಕೆಲವರು ಎಷ್ಟೋ ದಿನ ಬೇರೆ ಕ್ಲೈಂಟ್ ಸಿಗದೇ ತುಂಬಾ ದಿನಗಳ ಕಾಲ 'ಬೆಂಚ್'ನಲ್ಲಿದ್ದದ್ದೂ ಇತ್ತು.
ಹೀಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಸುಳ್ಳನ್ನು ಹೇಳಿ ಮುಂದೆ ಬಂದ ನನ್ನಂತಹವರು ಈಗ 'ನೀವು ಯಾರೂ ಸುಳ್ಳನ್ನು ಹೇಳಬೇಡಿ' ಎನ್ನೋದು 'ಇಪ್ಪತ್ತಕ್ಕೆ ಹಾದರ ಎಪ್ಪತ್ತಕ್ಕೆ ಪ್ರತಿವ್ರತೆ' ಎನ್ನುವಂತಾಗುತ್ತದೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿರೋದರಿಂದ ಈ ಮಾತನ್ನು ಹೇಳಬೇಕಾಗಿ ಬಂತು.
***
ಆಗ ನಾವೆಲ್ಲ ಇಂಟರ್‌ವ್ಯೂಗೆ ಭಾರತದಲ್ಲಿ ಹೋದಾಗ ವಾಕ್ ಇನ್ ಇಂಟರ್‌ವ್ಯೂ ಸಿಚುವೇಷನ್ ನಲ್ಲಿ ಬಾಗಿಲ ಬಳಿ ಇರುತ್ತಿದ್ದ ಪರಮಾತ್ಮ 'ನಿಮಗೆಷ್ಟು ವರ್ಷ ಅನುಭವ ಇದೆ?" ಎಂದು ಕೇಳಿ ಅಭ್ಯರ್ಥಿಗಳನ್ನು ಒಳಗೆ ಬಿಡುತ್ತಿದ್ದ, ಆಗ ಮೊದಲ ಸುಳ್ಳು ಹೊರಬರುತ್ತಿತ್ತು. ಅವನು ಕೇಳುವ ನಾಲ್ಕು ವರ್ಷಗಳ ಅನುಭವ ನಿಜವಾಗಿ ನನಗಿದ್ದರೆ ನಾನೇಕೆ ಆ ಸಂದರ್ಶನಕ್ಕೆ ಆ ರೀತಿ ಹೋಗುತ್ತಿದ್ದೆ? ಅದಿಲ್ಲವಾದ್ದರಿಂದಲೇ ತಾನೇ ನಾನು ಅಲ್ಲಿರೋದು ಎನ್ನುವ ಭಂಡ ಸಮಜಾಯಿಷಿ ಬೇರೆ!
ನಮ್ಮ ಟೆಕ್ನಿಕಲ್ ಜ್ಞಾನ ಚೆನ್ನಾಗಿತ್ತು, ಆಗೆಲ್ಲ RDBMS ಸಂಬಂಧೀ ವಿಷಯಗಳನ್ನು ಕರತಾಮಲಕ ಮಾಡಿಕೊಂಡಿದ್ದೆವು, ಅವರು ಕೇಳುವ ಪ್ರಶ್ನೆಗಳಿಗೆ ಅನುಭವದ ಹಿನ್ನೆಲೆಯಿಂದಲ್ಲದಿದ್ದರೂ ಪುಸ್ತಕಗಳನ್ನು ಓದಿದ ಹಿನ್ನೆಲೆಯಿಂದ, ನಮ್ಮ ನಡುವಿನ ಚರ್ಚೆಗಳ ಕಾರಣದಿಂದಲಾದರೂ ತಕ್ಕ ಮಟ್ಟಿಗೆ ಉತ್ತರ ಕೊಡುತ್ತಿದ್ದೆವು. ಆಗೆಲ್ಲ ಕೆಲಸವನ್ನು ತೆಗೆದುಕೊಳ್ಳಬೇಕು, ಅಮೇರಿಕಕ್ಕೆ ಹೋಗಬೇಕು ಅನ್ನೋದು ಬದುಕಿನ ಮಹಾ ದೊಡ್ಡ ಸಾಧನೆಯಾಗಿ ಕಾಣಿಸುತ್ತಿತ್ತು (ಈ ಭಾಗ್ಯಕ್ಕೆ ಇಲ್ಲಿ ಬರಬೇಕಾಯಿತೇ ಅನ್ನುವುದು ಬೇರೆ ವಿಷಯ!).
***
ಸುಳ್ಳನ್ನು ಸರಳವಾಗಿ "ಸುಳ್ಳು" ಎಂದು ಹೇಳುವ ಬದಲು "ಕನ್‌ಷ್ಟ್ರಕ್ತಿವ್ ಉತ್ತರ" ಎಂದು ಬದಲಾಯಿಸಿಕೊಳ್ಳೋಣ (ಅಮೇರಿಕದಲ್ಲಿ ಈ ರೀತಿ ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಬಹಳಷ್ಟು ನೆಲೆಗಳಲ್ಲಿ ಕೇಳಿದ್ದೇನೆ).
ನನ್ನ ಪ್ರಕಾರ ಕಾಲೇಜಿನಿಂದ ಹೊರಗೆ ಬಂದವರಿಗೆ ಒಂದೆರಡು ವರ್ಷಗಳ ಕಾಲ ಯಾವುದೇ ಕೆಲಸ ಮಾಡಲು ಆಗದಿದ್ದಾಗ, ಮುಂದೆ ಬೇರೆ ಯಾವ ಸಂದರ್ಶನಕ್ಕೆ ಹೋದರೂ 'ಗ್ರ್ಯಾಜುಯೇಷನ್ ಮುಗಿಸಿದಂದಿನಿಂದ ಇಂದಿನವರೆಗೆ ನೀವೇನು ಮಾಡುತ್ತಿದ್ದಿರಿ?' ಎನ್ನುವ ಪ್ರಶ್ನೆ ಒಂದಲ್ಲ ಒಂದು ರೀತಿಯ ಕನ್‌ಷ್ಟ್ರಕ್ಟಿವ್ ಉತ್ತರವನ್ನು ಬೇಡುತ್ತದೆ. ಕೆಲಸವಿಲ್ಲದೆ ಅನುಭವವಿಲ್ಲ, ಅನುಭವವಿಲ್ಲದೆ ಕೆಲಸವಿಲ್ಲ ಎನ್ನುವಂತಹ ದಿನಗಳಲ್ಲಿ ನಿಮ್ಮ ಕಣ್ಣ ಮುಂದೆ ಹೇಗಾದರೂ ಮಾಡಿ ಒಂದಲ್ಲ ಒಂದು ಕೆಲಸವನ್ನು ತೆಗೆದುಕೊಳ್ಳುತ್ತೇನೆ ಎನ್ನುವ ಛಲ ಇರುವಾಗ ಒಂದಿಷ್ಟು ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಹೇಳಿದರೆ ಅದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ನನ್ನ ಅಭಿಮತ. ಈ ವಿಷಯದಲ್ಲಿ ಕನ್ನಡಿಗರು ಯಾವಾಗಲೂ ಹಿಂದೆ ಬಿದ್ದಿರೋದು ಮತ್ತೊಂದು ಸತ್ಯ. ಕೆಲಸವನ್ನು ದೊರಕಿಸಿಕೊಳ್ಳಲು, ತಮ್ಮದನ್ನು ಸಾಧಿಸಿಕೊಳ್ಳಲು ಉಳಿದ ರಾಜ್ಯಗಳವರು ಎಂತೆಂಥಹ ಮಟ್ಟವನ್ನು ತಲುಪುತ್ತಾರೆ ಎನ್ನುವುದು ನಿಮಗಿನ್ನೂ ಗೊತ್ತಿಲ್ಲ, ಅವರ ಮುಂದೆ ಕನ್ನಡಿಗರ ಪ್ರಯತ್ನ ಏನೇನೂ ಅಲ್ಲ.
ನೀವು ರಿಕ್ರ್ಯೂಟರ್‌ಗಳ ಜೊತೆ ಮಾತನಾಡುವಾಗ ನಿಮ್ಮ ಈ ಕನ್‌ಷ್ಟ್ರಕ್ಟಿವ್ ಉತ್ತರದ ಬಗ್ಗೆ ಒಂದು ಸೂಕ್ಷ್ಮವಾಗಿ ಹೇಳಬೇಕಾದ ಮಾತೆಂದರೆ ಒಮ್ಮೆ ಹೇಳಿದ ಮಾತನ್ನು ಸಾಧಿಸಿಕೊಳ್ಳುವ ಜಾಣತನವನ್ನೂ ನೀವು ಮೊದಲೇ ಯೋಚಿಸಿಕೊಳ್ಳಬೇಕು - ನಾನು ಹೀಗಂದರೆ ಹೇಗೆ, ಅವರು ಅದಕ್ಕೆ ಏನೇನು ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಇನ್ನೇನು ಉತ್ತರಗಳನ್ನು ಹೇಳಬಹುದು ಇತ್ಯಾದಿ...ಹೀಗೆ ಚದುರಂಗದ ಆಟದಲ್ಲಿನ ಮುಂದಿನ ನಡೆಗಳನ್ನು ಊಹಿಸಿ, ಮನನ ಮಾಡಿಕೊಂಡಾದ ಮೇಲೆ ಒಂದಿಷ್ಟು ಸಂದರ್ಶನಗಳನ್ನು ಮುಗಿಸಿದ ಮೇಲೆ ನೀವೇ ಎಲ್ಲದಕ್ಕೂ ತಯಾರಾಗಿರುತ್ತೀರಿ.
ನಿಮಗೊಂದು ನೈಜ ಉದಾಹರಣೆ - ನಾನು ಮತ್ತು ನನ್ನ ಸಹೋದ್ಯೋಗಿ ಸ್ನೇಹಿತ ಇಬ್ಬರೂ ಬಾಂಬೆ ಬೇಸ್ಡ್ ಕಂಪನಿಯೊಂದರ ವಾಕ್ ಇನ್ ಸಂದರ್ಶನಕ್ಕೆ ಹೋಗಿದ್ದೆವು, ಮೊದಲು ನಾನು, ನನ್ನ ವಾಚಾಳಿತನಕ್ಕೆ ಮರುಳಾಗಿ ನನಗೆ ಸ್ಥಳದಲ್ಲೇ ಅಮೇರಿಕದ ಕೆಲಸದ ಆಫರ್ ಕೊಟ್ಟರು (ಆ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಅದು ಬೇರೆ ವಿಷಯ), ನನ್ನ ನಂತರ ಸಂದರ್ಶನಕ್ಕೆ ಹೋದ ನನ್ನ ಸ್ನೇಹಿತನಿಗೂ ಆಫರ್ ಕೊಟ್ಟರು - ಅವನು ತನ್ನ ಸಂದರ್ಶನದಲ್ಲಿ ಹೇಳಿದ್ದೇನೆಂದರೆ 'ಸತೀಶ ಈ ಪ್ರಾಜೆಕ್ಟಿನಲ್ಲಿ ಟೀಮ್ ಲೀಡರ್, ನಾನು ಅವನ ಜೊತೆ ಟೀಮ್ ಮೆಂಬರ್' ಎಂಬುದಾಗಿ! ಆದರೆ ಸತ್ಯವಾದ ವಿಷಯವೆಂದರೆ ನಾವಿಬ್ಬರೂ ಒಂದೇ ಟೀಮಿನಲ್ಲಿ ಇದ್ದವರು, ಆದರೆ ಆ ಸಮಯಕ್ಕೆ ಸರಿಯಾಗಿ ಅವನು ಈ ವಾಕ್ಯವನ್ನು ಹೇಳಿದ ಮೇಲೆ ಅವನನ್ನು ನನಗೆ ಕೇಳಿದ ಯಾವುದೇ ಪ್ರಶ್ನೆಗಳನ್ನೂ ಕೇಳಲಿಲ್ಲ. ನಾನೂ ಅವನೂ ಇಬ್ಬರೂ ಅಮೇರಿಕೆಗೆ ಬೇರೆ ಒಂದು ಕಂಪನಿಯ ಮೂಲಕ ಬಂದವರು, ಇಂದಿಗೂ ಈ ಸಂದರ್ಭವನ್ನು ನೆನೆಸಿಕೊಂಡು ನಗುತ್ತೇವೆ.
***
ಇಷ್ಟು ಹೇಳಿದ ಮೇಲೆ ಸುಳ್ಳನ್ನು, ಅಲ್ಲ, ಕನ್‌ಷ್ಟ್ರಕ್ಟಿವ್ ಉತ್ತರವನ್ನು ನೀವು ಹೇಗೆ ಕೊಡುತ್ತೀರಿ ಬಿಡುತ್ತೀರಿ ಎಂಬುದು ನಿಮಗೆ ಸೇರಿದ್ದು. ಏನಾದರೂ ಮಾಡಿ ನಿಮ್ಮ ಮಾತುಗಳನ್ನು ಸಾಧಿಸಿಕೊಳ್ಳುವ ಛಲ ನಿಮ್ಮಲ್ಲಿ ಹುಟ್ಟಲ್ಲಿ. ಮುಂದೆ ಹೇಗೋ, ಆದರೆ ಇಂದಿನ ರುತ್‌ಲೆಸ್ ಸಂದರ್ಭಗಳಲ್ಲಿ ನಿಮ್ಮ ವಾಚಾಳಿತನ ನಿಮಗೆ ನೆರವಾಗಲಿ.
ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಹೆಚ್ಚು ಜನರು ಕೊಡುತ್ತಾರೆ - ನಿಮ್ಮಲ್ಲಿರುವ 'ಅಯ್ಯೋ' ಎನ್ನುವ ಅಪರಾಧಿ ಭಾವವನ್ನು ಕೆಲಸವನ್ನು ತೆಗೆದುಕೊಳ್ಳುವ ಮಟ್ಟಿಗೆ ಒದ್ದು ಓಡಿಸಿ.
***
ಮುಂದಿನ ಶನಿವಾರ:
12) What you do once you get the job!

Labels: Recruiters
1 Comments:
ಇನ್ನೂ ಸುಳ್ಳು ಹೇಳಬೇಕೆ? ಬೇಡ್ವೆ? ಎಂಬ ಗೊಂದಲ ಕಡಿಮೆ ಅಗಲಿಲ್ಲಾ :)
Post a Comment
<< Home