ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?
ಹಿಂದಿನ ಬರಹಗಳಲ್ಲಿ ರೆಸ್ಯೂಮೆ ಬಗ್ಗೆ ಬರೆದಾಗ ಹಾಗೂ ಕವರ್ ಲೆಟರ್ ಬಗ್ಗೆ ಬರೆದಾಗ 'ರೆಫೆರೆನ್ಸ್' ಬಗ್ಗೆನೂ ಬರೀಬೇಕು ಅಂದುಕೊಂಡಿದ್ದೆ, ಆದರೆ ಎಲ್ಲ ರೀತಿಯ ಕೆಲಸಗಳಲ್ಲೂ ರೆಫೆರೆನ್ಸ್ ಕೇಳೋದಿಲ್ಲ, ಮಾಹಿತಿ ತಂತ್ರಜ್ಞಾನದಲ್ಲಿ ನಾನು ತಿಳಿದುಕೊಂಡ ಮಟ್ಟಿಗೆ ರೆಫೆರೆನ್ಸ್‌ಗಳನ್ನು ಕೇಳಿ ಫಾಲೋ ಅಪ್ ಮಾಡಿದ ಸಂದರ್ಭಗಳು ಕಡಿಮೆ, ಅದೇ ವೈದ್ಯಕೀಯ ಸೇವೆಗೆ ಸಂಬಂಧಿಸಿದ ಕೆಲಸಗಳಲ್ಲಿ ಹೆಚ್ಚೂ ಕಡಿಮೆ ಪ್ರತಿಯೊಂದು ಸಂದರ್ಶನಕ್ಕೆ ಮೊದಲು ಅಥವಾ ನಂತರ 'ರೆಫೆರೆನ್ಸ್'ಗಳನ್ನು ಕೇಳಿಯೇ ಕೇಳುತ್ತಾರೆ.
ನೀವು ಅರಸುತ್ತಿರುವ ಉದ್ಯೋಗಕ್ಕೆ ತಕ್ಕಂತೆ ಸೂಚ್ಯವಾಗಿ ನಿಮ್ಮ ರೆಸ್ಯೂಮೆಯಲ್ಲಿ References are available upon request ಎಂದು ಸೇರಿಸಿ, ಅದಕ್ಕೆ ತಕ್ಕಂತೆ ಮೂರು ಜನರಿಂದ ಐದು ಜನರವರೆಗೆ ರೆಫೆರೆನ್ಸ್‌ಗಳನ್ನು ಕೊಡುವುದಕ್ಕೆ ತಯಾರಾಗಿರಿ. ನೀವು ಕೊಡಬೇಕಾದ ವಿವರವೆಂದರೆ ಅವರ ಹೆಸರು, ಇ-ಮೇಲ್ ವಿಳಾಸ, ಫೋನ್ ನಂಬರ್. ಹಲವು ಕೆಲಸಗಳಲ್ಲಿ ರೆಫೆರೆನ್ಸ್ ಚೆಕ್ ಮಾಡುವುದಕ್ಕೋಸ್ಕರವೇ ಒಂದು ಪ್ರಶ್ನಾವಳಿ (questionnaire) ಯನ್ನು ಅವರಿಗೆ ಕಳಿಸಲಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ರೆಫೆರೆನ್ಸ್ ಕೊಡುವವರು ಒಂದು ಪುಟದಲ್ಲಿ ನಿಮ್ಮ ಬಗ್ಗೆ ಬರೆದು ಫ್ಯಾಕ್ಸ್ ಅಥವಾ ಮೇಲ್ ಮಾಡಬೇಕಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ಫೋನ್ ಮೂಲಕ ಐದು ಹತ್ತು ನಿಮಿಷಗಳಲ್ಲಿ ನಿಮ್ಮ ಬಗ್ಗೆ ಕೇಳಲಾಗುತ್ತೆ, ಇತ್ಯಾದಿ...ವಿವರಗಳೇನೇ ಇರಲಿ ನೀವು ಸಂದರ್ಶನ ಮಾಡುವವರಿಂದ ವಿವರಗಳನ್ನು ಪಡೆದು ನೀವು ರೆಫೆರೆನ್ಸ್ ನೀಡಿದವರಿಗೆ ಮುಂಚಿತವಾಗಿಯೇ ತಿಳಿಸುವುದು ಒಳ್ಳೆಯದು.
ರೆಫೆರೆನ್ಸ್‌ಗೆ ಯಾರನ್ನೆಲ್ಲ ಕೊಡಬಹುದು ಎಂದರೆ ನಿಮ್ಮ ಸಹೋದ್ಯೋಗಿಗಳು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ನಿಮ್ಮ ಹಿಂದಿನ ಬಾಸ್‌ಗಳು, ನಿಮ್ಮನ್ನು ಹತ್ತಿರದಿಂದ ಬಲ್ಲ ಪ್ರೊಫೆಸರುಗಳು, ನಿಮ್ಮ ಮ್ಯಾಟ್ರಿಕ್ಸ್ ಪದ್ದತಿಯ ಆರ್ಗನೈಸೇಷನ್ ಚಾರ್ಟ್‌ನಲ್ಲಿರುವ ಉಳಿದ ಡಿಪಾರ್ಟ್‌ಮೆಂಟಿನ ಮುಖ್ಯಸ್ಥರು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ಇತ್ಯಾದಿ.
ಈಗ ಮುಖ್ಯ ವಿಷಯಕ್ಕೆ ಬರೋಣ.
೬) ನಿಮ್ಮನ್ನೇಕೆ ಅವರು ಕೆಲಸಕ್ಕೆ ತಗೋಬೇಕು?!
೧೯೯೮ ಮೇ ತಿಂಗಳಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಸೊಲೋಮನ್ ಸ್ಮಿತ್ ಬಾರ್ನಿಯಲ್ಲಿ ನನಗೊಂದು ಟೆಕ್ನಿಕಲ್ ಪೊಸಿಷನ್‌ಗೆ ಇಂಟರ್‌ವ್ಯೂವ್ ಬಂದಿತ್ತು, ಎಂದಿನಂತೆ ತಯಾರಿ ನಡೆಸುತ್ತಿರುವಾಗ ಪಬ್ಲಿಕ್ ಲೈಬ್ರರಿಯಲ್ಲಿ ಯಾವುದೋ ಪುಸ್ತಕವೊಂದರಲ್ಲಿ ತೆಗೆದೊಡನೆ 'Why should we hire you?' ಅನ್ನೋ ಪ್ರಶ್ನೆ ಮುಖಕ್ಕೆ ರಾಚಿತು, ಒಂದು ಐದು ನಿಮಿಷ ಓದಿ ಅದರ ಸ್ವಾರಸ್ಯವನ್ನು ಮನನ ಮಾಡಿಕೊಂಡೆ, ಮರುದಿನ ಇಂಟರ್‌ವ್ಯೂವ್‌ನಲ್ಲಿ ನನಗೆ ಆಶ್ಚರ್ಯವಾಗುವಂತೆ ಅವರು ಕೇಳಿದ ಮೊದಲನೇ ಪ್ರಶ್ನೆಯೇ 'ನಾನೇಕೆ ನಿನ್ನನ್ನು ಈ ಕೆಲಸಕ್ಕೆ ತೆಗೆದುಕೊಳ್ಳಬೇಕು?' ಸ್ವಲ್ಪವಾದರೂ ತಯಾರಿ ನಡೆಸಿದ್ದರಿಂದ ಅಲ್ಲಿ ನಾನು ಕಕ್ಕಾಬಿಕ್ಕಿಯಾಗದೇ ಎಂದಿನ ಲವಲವಿಕೆಯಲ್ಲಿಯೇ ನನ್ನ ಉತ್ತರವನ್ನು ಒಪ್ಪಿಸಿದ್ದೆ! ತದನಂತರ ನನ್ನ ಸಂದರ್ಶನದಲ್ಲಿ ಪಾಸಾಗಿ ಅಲ್ಲಿ ಕೆಲಸಕ್ಕೆ ಕರೆದರೂ ನಾನು ಆ ಕಂಪನಿಯನ್ನು ಸೇರಿಕೊಳ್ಳಲಿಲ್ಲ, ಅದು ಬೇರೆ ವಿಷಯ.
ನೀವು ಈ ಪ್ರಶ್ನೆಗೆ ಏನು/ಹೇಗೆ ಉತ್ತರಿಸುತ್ತೀರ ಎನ್ನುವುದು ಬಹಳ ಮುಖ್ಯ, ಈ ಪ್ರಶ್ನೆಯಲ್ಲಿ ನಿಮ್ಮ Sales pitch ಇರಬೇಕು, ಅಲ್ಲದೇ ನಿಮ್ಮ ಕಮ್ಮೂನಿಕೇಷನ್ ಸ್ಕಿಲ್ಸ್, ಬಾಡಿ ಲಾಂಗ್ವೇಜ್, ಮುಂತಾದವುಗಳನ್ನು ಗಮನಿಸಲಾಗುತ್ತೆ ಅನ್ನೋದು ಮನಸ್ಸಿನಲ್ಲಿರಲಿ, ಅಲ್ಲದೇ ನಿಮಗೆ ಈ ಕೆಲಸದಲ್ಲಿ ಆಸಕ್ತಿ ಇರದೇ ಹೋದರೆ ನೀವು ಈ ಹಂತವನ್ನು ತಲುಪುತ್ತಿರಲಿಲ್ಲವಾದ್ದರಿಂದ ಕೆಲಸ ಸಿಗುತ್ತದೆಯೋ ಬಿಡುತ್ತದೆಯೋ, ಕೆಲಸ ಸಿಕ್ಕರೆ ತೆಗೆದುಕೊಳ್ಳುತ್ತೀರೋ ಇಲ್ಲವೋ ಅದರ ಬಗ್ಗೆ ಯೋಚಿಸದೆ ನಿಮ್ಮನ್ನು ಈ ಹಂತದಲ್ಲಿ ಈ ಕೆಲಸಕ್ಕೆ ಏಕೆ ಅವರು ತೆಗೆದುಕೊಳ್ಳಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಧನಾತ್ಮಕವಾದ (positive) ಉತ್ತರವೊಂದನ್ನು ಸಿದ್ಧಮಾಡಿಕೊಳ್ಳಿ, ಹಾಗೆ ಸಿದ್ಧಮಾಡಿಕೊಂಡ ಉತ್ತರವೊಂದನ್ನು ನ್ಯಾಯವಾಗಿ ಒಪ್ಪಿಸಿ!
ಈ ಕೆಲಸಕ್ಕೆ ಬೇಕಾದ Requirements ಮನಸ್ಸಿನಲ್ಲಿರಲಿ, Industry ಕೂಡಾ ಆಷ್ಟೇ ಮುಖ್ಯ, ಅಲ್ಲದೇ ನೀವು ಹೇಳಿದ ವಾಕ್ಯಗಳು ನಿಮ್ಮನ್ನೇ ಹಿಂತಿರುಗಿ ಹೊಡೆಯದಿರುವಂತೆ ಹಾಗೂ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಸದಂತೆ ಮಾತನಾಡುವ ಜಾಣತನವೂ ಇರಲಿ - ಉದಾಹರಣೆಗೆ 'I love to work on patients with HIV!' ಎಂದೇನೋ ಆವೇಷದಲ್ಲಿ ಹೇಳಿ ಬಿಟ್ಟಿರಿ ಎಂದುಕೊಳ್ಳಿ, ನಾಳೆ ನಿಮ್ಮ ಸುತ್ತ ಮುತ್ತ ಇಂತಹ ರೋಗಿಗಳೇ ತುಂಬಿಕೊಂಡರೆ ಇಂಟರ್‌ವ್ಯೂವ್ ಮಾಡಿದವರೇ ನಿಮ್ಮ ಬಾಸೂ ಆದರೆ ಏನೆಂದು ದೂರು ಕೊಡುತ್ತೀರಿ - 'ನನಗೆ ಇಂತಹ ಪೇಷಂಟ್‌ಗಳು ಅಂದ್ರೆ ಪಂಚಪ್ರಾಣಾ ಅಂತ ನೀನೇ ಹೇಳಿದ್ದೆ!' ಎಂದು ಅವರು ತಿರುಗಿ ಪ್ರಶ್ನೆ ಹಾಕದಿದ್ದರೆ ಸಾಕು.
ಈ ಪ್ರಶ್ನೆಗೆ ಉತ್ತರವಾಗಿ ಸೇರಿಸಬಹುದಾದ/ಬೇಕಾದ ವಾಕ್ಯಗಳೆಂದರೆ:
- I have what it takes to do the job
- I am a team player
- I can hit the ground running
- Consider addressing specific requirements in the answer (I have been a C++ developer specifically working on Virtual Reality applications)
- Explain how you will be an asset to this project/team/group
ಏನನ್ನು ಹೇಳಬಾರದೆಂದರೆ:
- I really need this job
- I am a hard worker
- I have excellent communication skills
- I like your company
- I would like to be promoted
ಈ ಪ್ರಶ್ನೆಗೆ ಉತ್ತರವನ್ನು ತಯಾರಿಸುವಾಗ ನಿಮ್ಮ potential ನಿಮ್ಮ ಕಣ್ಣ ಮುಂದಿರಲಿ, ನಿಮ್ಮ ಬೇಕು-ಬೇಡಗಳು, strengths-weakness ನಿಮಗೆ ಗೊತ್ತಿರಲಿ. ನಿಮ್ಮ ಹಿನ್ನೆಲೆ, ಅನುಭವ ಇಂತಹ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಸಹಾಯ ಮಾಡಲಿ, ಈ ಪ್ರಶ್ನೆಯನ್ನು ಬೇರೆ ಯಾವುದೇ ವೇರಿಯೇಷನ್‌ನಲ್ಲಿ ಕೇಳಿದರೂ ನಿಮ್ಮ ಉತ್ತರ ಸ್ಥಿರವಾಗಿರಲಿ.
ಮುಖ್ಯವಾಗಿ, ನೀವು ಈ ಪ್ರಶ್ನೆಗೆ ಕೊಟ್ಟ ಉತ್ತರದಿಂದ ಮಾತ್ರ ನಿಮ್ಮನ್ನು ಅವರು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಂದು ಯೋಚಿಸದೇ ಒಂದೆರಡು ನಿಮಿಷಗಳಲ್ಲಿ ಇದನ್ನು ಉತ್ತರಿಸಿ ಮುಂದೆ ಹೋಗಿ.
***
ನಾನು ಬಹಳ ಉದ್ದುದ್ದವಾಗಿ ಬರೆಯುತ್ತೇನೆ ಅನ್ನೋದು ಹಲವರ ಕಾಮೆಂಟ್ ಆದ್ದರಿಂದ ಈ ವಾರ ಇಲ್ಲಿಗೇ ನಿಲ್ಲಿಸಿ ಮುಂದಿನವಾರ ಈ ಅಂಕಣವನ್ನು ಮುಂದುವರಿಸುತ್ತೇನೆ!
***
ಮುಂದಿನ ಶನಿವಾರ:
7) How much money are you looking for?
8) How to dress and "smell" for success!

1 Comments:
Sir.. ತುಂಬಾ ಚೆನ್ನಾಗಿ guide ಮಾಡಿದ್ದಿರ , ಪ್ರತಿಯೊಂದು ಸಾಲುಗಳು ತುಂಬಾ informative ಆಗಿವೆ
Post a Comment
<< Home